ಇಂಡಿಯನ್ ಲಿಂಗ್ವಿಸ್ಟಿಕ್ ಸೊಸೈಟಿ

ಲಿಂಗ್ವಿಸ್ಟಿಕ್ ಸೊಸೈಟಿ ಆಫ್ ಇಂಡಿಯ (ಭಾರತೀಯ ಭಾಷಾವಿe್ಞÁನ ಸಂಘ) ಎನ್ನುವ ಹೆಸರನ್ನುಳ್ಳ ಈ ಸಂಸ್ಥೆ ಆಧುನಿಕ ಭಾಷಾವಿe್ಞÁನ ರೀತ್ಯ ಭಾರತೀಯ ಭಾಷೆಗಳ ವೈe್ಞÁನಿಕ ಅಧ್ಯಯನ ಹಾಗೂ ಸಂಶೋಧನೆಯ ಪ್ರೋತ್ಸಾಹ ಹಾಗೂ ಬೆಳೆವಣಿಗೆಗಾಗಿ 1928ರ ಏಪ್ರಿಲ್‍ನಲ್ಲಿ ಲಾಹೋರಿನಲ್ಲಿ ಸ್ಥಾಪನೆಯಾಯಿತು. ಸ್ಥಾಪನೆಗೆ ಕಾರಣರಾದ ಮಹನೀಯರುಗಳಲ್ಲಿ ತಾರಾಪೂರ್‍ವಾಲಾ, ಸುನೀತಿಕುಮಾರ ಚಟರ್ಜಿ ಮತ್ತು ಸಿದ್ಧೇಶ್ವರ ವರ್ಮ ಇವರ ಹೆಸರುಗಳನ್ನು ಸ್ಮರಿಸಬಹುದು. ಮುಂದೆ ಸಂಸ್ಥೆಯ ಅಭಿವೃದ್ಧಿಗಾಗಿ ದುಡಿದವರಲ್ಲಿ ಸುಕುಮಾರ ಸೇನ್, ಎಸ್.ಎಂ. ಕತ್ರೆ. ಬಾಬು ರಾಮ ಸಕ್ಸೆನಾ, ಮೀನಾಕ್ಷಿ ಸುಂದರಂ ಮುಂತಾದವರು ಪ್ರಮುಖರು. 1928ರ ನವೆಂಬರ್ ತಿಂಗಳಲ್ಲಿ ನಡೆದ ಸರ್ವಸದಸ್ಯರ ಪ್ರಥಮ ಸಭೆಯಲ್ಲಿ ತಾರಪೂರ್ ವಾಲಾರನ್ನು ಸಂಸ್ಥೆಯ ಪ್ರಥಮ ಅಧ್ಯಕ್ಷರಾಗಿ ಚುನಾಯಿಸಲಾಯಿತು. ಇದಕ್ಕೂ ಹಿಂದೆ ಅಂದರೆ 1922ರ ಓರಿಯಂಟಲ್ ಕಾನ್‍ಫರೆನ್ಸಿನಲ್ಲಿ ಅವರು ಇಂಥ ಒಂದು ಸಂಸ್ಥೆಯ ಸ್ಥಾಪನೆಯ ಕನಸು ಕಂಡಿದ್ದರು. ಆಮೇಲೆ ಈ ಸಂಸ್ಥೆ ಇಂಡಿಯನ್ ಫೈಲಾಲೋಜಿಕಲ್ ಸೊಸೈಟಿ ಎನ್ನುವ ಸಂಸ್ಥೆಯೊಡನೆ ವಿಲೀನಗೊಂಡಿತು. 1938ರಲ್ಲಿ ಇದರ ಕಚೇರಿಯನ್ನು ಕೋಲ್ಕತ್ತೆಗೂ 1954ರಲ್ಲಿ ಪೂನದ ಡೆಕ್ಕನ್ ಕಾಲೇಜ್‍ಗೂ ವರ್ಗಾಯಿಸಲಾಯಿತು.

	ಭಾಷಾವಿe್ಞÁನದ ಪ್ರಗತಿಗಾಗಿ ಈ ಸಂಸ್ಥೆ ನಡೆಸುತ್ತಿರುವ ಕಾರ್ಯಕಲಾಪಗಳು ಹೀಗಿವೆ :

	1 ಭಾಷಾವಿe್ಞÁನಿಗಳ ಸಮ್ಮೇಳನಗಳನ್ನು ನಡೆಸಿ ವಿದ್ವಾಂಸರು ಬರೆದು ಓದುವ ಸಂಶೋಧನ ಪ್ರಬಂಧಗಳ ಮೇಲೆ ಚರ್ಚೆ ನಡೆಸುವುದು.

	2 ಸದಸ್ಯರು ಬರೆದ ಪ್ರಬಂಧಗಳನ್ನು ನಿಯತಕಾಲಿಕದಲ್ಲಿ ಪ್ರಕಟಿಸುವುದು.

	3 ಭಾರತೀಯ ಭಾಷೆಗಳ ವೈe್ಞÁನಿಕ ಸಂಶೋಧನೆಗೆ ಸಂಬಂಧಪಟ್ಟ ಮಹಾಪ್ರಬಂಧಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸುವುದು.

	4 ಭಾಷಾವಿe್ಞÁನದ ಪುಸ್ತಕಗಳುಳ್ಳ ಒಂದು ಗ್ರಂಥಾಲಯವನ್ನು ನಡೆಸುವುದು.

	5 ಭಾಷಾವಿe್ಞÁನದ ಬೇಸಗೆ ಶಾಲೆಗೆ ಬೇಕಾದ ಸಹಾಯ ನೀಡುವುದು.

	6. ಭಾಷಾವಿe್ಞÁನದ ಪುರೋಭಿವೃದ್ಧಿಗಾಗಿ ಶ್ರಮಿಸಿದ ವಿದ್ವಾಂಸರನ್ನು ಸನ್ಮಾನಿಸುವುದು, ಇತ್ಯಾದಿ.

	ಈ ಉದ್ದೇಶಗಳನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಮತ್ತು ಕೆಲವು ಸದಸ್ಯರುಗಳನ್ನೊಳಗೊಂಡ ಒಂದು ಕಾರ್ಯಕಾರಿ ಸಮಿತಿ ರಚಿತವಾಗಿದ್ದು ಪ್ರತಿವರ್ಷ ಸರ್ವಸದಸ್ಯರ ಸಭೆಯಲ್ಲಿ ಇದಕ್ಕೆ ಚುನಾವಣೆ ನಡೆಯುತ್ತದೆ. ಸದಸ್ಯರಿಂದ ಮತ್ತು ಪೋಷಕರಿಂದ ಪಡೆದ ಚಂದಾ ಹಣ, ಭಾರತ ಮತ್ತು ಅಮೆರಿಕದ ದಾನಿಗಳಿಂದ ಪಡೆದ ಹಣ ಹಾಗೂ ಸರ್ಕಾರದಿಂದ ಸಹಾಯಾರ್ಥವಾಗಿ ಪಡೆದ ಧನದಿಂದ ಈ ಕಾರ್ಯಗಳು ನಡೆಯುತ್ತಿವೆ.

	ಮೇಲೆ ಕಾಣಿಸಿದ ಧ್ಯೇಯಗಳ ಸಾಧನೆಗಾಗಿ ಸಂಘ ಈಗಾಗಲೇ ತುಂಬಾ ಶ್ರಮಿಸಿದೆ. ಸಮ್ಮೇಳನಗಳ ಮೂಲಕ ಭಾರತೀಯ ಹಾಗೂ ವಿದೇಶೀಯ ಭಾಷಾವಿe್ಞÁನಿಗಳನ್ನು ಒಂದೆಡೆ ಸೇರಿಸಿ ಉಚ್ಚಮಟ್ಟದ ವಿಚಾರ ವಿನಿಮಯದ ವ್ಯವಸ್ಥೆ ಮಾಡುತ್ತಿದೆ. ಸಂಸ್ಥೆ ಪ್ರಾರಂಭವಾದಂದಿನಿಂದಲೂ ಇಂಡಿಯನ್ ಲಿಂಗ್ವಿಸ್ಟಿಕ್ ಸಂಪುಟಗಳ ಮೂಲಕ ಸಂಶೋಧನ ಬರಹಗಳನ್ನು ಪ್ರಕಾಶಕ್ಕೆ ತರುತ್ತಿದೆಯಲ್ಲದೆ ಕೆಲವು ಪುಸ್ತಕಗಳನ್ನೂ ಪ್ರಕಟಿಸಿದೆ. ಗ್ರಂಥಾಲಯದಲ್ಲಿ ಭಾಷಾ ವಿe್ಞÁನಕ್ಕೆ ಸಂಬಂಧಪಟ್ಟ ನವೀನ ಪ್ರಕಟಣೆಗಳು ದೊರೆಯುತ್ತವೆ. 1954ರಿಂದ ಪ್ರತಿ ಬೇಸಗೆಯಲ್ಲಿ ನಡೆಯುವ ಭಾಷಾವಿe್ಞÁನದ ತರಪೇತು ಶಾಲೆಗೆ ಗ್ರಂಥಾಲಯ ಸೌಲಭ್ಯ ಮುಂತಾದ ಸಹಾಯಗಳನ್ನಿತ್ತಿದೆ. ಅನೇಕ ವಿದ್ವಾಂಸರನ್ನು ಸನ್ಮಾನಿಸಿ ಅವರ ಹೆಸರಿನಲ್ಲಿ ಸ್ಮಾರಕ ಹಾಗೂ ಸನ್ಮಾನ ಸಂಚಿಕೆಗಳನ್ನು ಹೊರಡಿಸಿದೆ. ಭಾರತದಲ್ಲಿ ಭಾಷಾವಿe್ಞÁನದ ಅಧ್ಯಯನದ ಪ್ರಚಾರಕಾರ್ಯದಲ್ಲಿ ಈ ಸಂಸ್ಥೆಯ ಪಾತ್ರ ತುಂಬ ಮಹತ್ತ್ವದ್ದಾಗಿದೆ.

(ಯು.ಪಿ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ